ಗುರುದ್ವಾರ
ಸಿಕ್ಖರ ಉಪಾಸನ ಮಂದಿರಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಗುರುದ್ವಾರಗಳಲ್ಲಿ ಮುಖ್ಯವಾದುವು ಅಮೃತಸರ, ಕಪೂರ್ಥಲ, ಆನಂದಪುರ, ನಾಂದೇಡಗಳಲ್ಲಿವೆ. ಇವುಗಳಲ್ಲಿ ಸಿಕ್ಖರ ಪವಿತ್ರ ಗ್ರಂಥವಾದ ಗ್ರಂಥ್ ಸಾಹೇಬ್ (ನೋಡಿ- ಗ್ರಂಥ್-ಸಾಹೇಬ್) ಪ್ರತಿಯನ್ನು ಇಟ್ಟಿರುತ್ತಾರೆ. ದೇವಸ್ಥಾನಗಳಲ್ಲಿ ಉತ್ಸವ ವಿಗ್ರಹದ ಮೆರವಣಿಗೆಯನ್ನು ನಡೆಸುವಂತೆ ಗುರುದ್ವಾರಗಳಲ್ಲಿ ಈ ಗ್ರಂಥವನ್ನು ತುಂಬ ವಿತರಣೆಯಿಂದ ಪ್ರತಿನಿತ್ಯವೂ ಮೆರವಣಿಗೆ ನಡೆಸುತ್ತಾರೆ. ಸಿಕ್ಖರಿಗೆ ಅವರ ಪವಿತ್ರ ಗ್ರಂಥವೇ ದೇವಸಾಕ್ಷಾತ್ಕಾರದ ಪ್ರಮುಖ ಮಾರ್ಗ, ಅಮೃತಸರದಲ್ಲಿರುವ ಅತ್ಯಂತ ಪ್ರಖ್ಯಾತವಾದ ಸುವರ್ಣ ಮಂದಿರದಲ್ಲಿ ಸಿಖ್ ಪೂಜಾರಿಯೊಬ್ಬ ಈ ಗ್ರಂಥದ ಬಳಿ ಕುಳಿತು ಅದರ ಮೇಲೆ ದೂಳು ಅಥವಾ ಕ್ರಿಮಿಕೀಟಗಳು ಎರಗದಂತೆ ಚಾಮರ ಹಾಕುತ್ತಿರುತ್ತಾನೆ.			  (ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ